ಜಿಲ್ಲಾ ಸುದ್ದಿ
ಹದಿಗೆಟ್ಟ ರಸ್ತೆ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಹಿಡಿ ಶಾಪ

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಸೈದಾಪುರ, ಢವಳೇಶ್ವರ ಮಧ್ಯೆ ಹಾಯ್ದು ಹೋಗಿರುವ ಐದು ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದರೂ ಇದುವರೆಗೂ ದುರಸ್ತಿಯಾಗದೇ ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುವಂತಾಗಿದೆ. ಶಾಸಕ ಸಿದ್ದು ಸವದಿ ಪ್ರತಿನಿಧಿಸುವ ತೇರದಾಳ ಮತಕ್ಷೇತ್ರಕ್ಕೆ ಒಳಪಡುವ ಸೈದಾಪುರ-ಢವಳೇಶ್ವರ ನಡುವಿನ ರಸ್ತೆ ಹಾಳಾಗಿ ನಾಲ್ಕು ವರ್ಷ ಗತಿಸಿದರೂ ಇದುವರೆಗೂ ದುರಸ್ತಿಯಾಗಿಲ್ಲ. ಕಂದಿಲು ಹಚ್ಚಿ ಹುಡುಕಿದರೂ ರಸ್ತೆಯುದ್ದಕ್ಕೂ ಡಾಂಬರ್ ಎಲ್ಲಿಯೂ ಕಾಣುವುದಿಲ್ಲ. ಈ ಬಗ್ಗೆ ಶಾಸಕ ಸಿದ್ದು ಸವದಿ ಅವರಿಗೆ ಗಮನಕ್ಕೆ ತಂದ್ರೆ ಶಾಸಕರು ಕೇವಲ ಭರವಸೆಯಲ್ಲಿಯೇ ಕಾಲಹರಣ ಮಾಡ್ತಿದಾರಂತೆ. ಇನ್ನು ತೆಗ್ಗು ದಿನ್ನೆಗಳ ನಡುವೆಯೇ ನಿತ್ಯ ಓಡಾಡುವ ಜನರು ಎದ್ದು ಬಿದ್ದು ಸಂಚಾರ ಮಾಡುವ ದುಃಸ್ಥಿತಿ ಬಂದೊದಗಿದೆ. ಇನ್ನಾದರೂ ನಮ್ಮ ಕಷ್ಟವನ್ನು ಜನಪ್ರತಿನಿಧಿಗಳು ನೋಡಲಿ ಅನ್ನೋದು ಸೈದಾಪುರ-ಢವಳೇಶ್ವರ ಗ್ರಾಮದ ಜನರ ಅಳಲಾಗಿದೆ….