ನಾನು ಹಿಂದೂ ಅಂದಮೇಲೆ ಹಿಂದುತ್ವವನ್ನ ಆಧರಿಸಲೇ ಬೇಕು: ಮಂತ್ರಾಲಯ ಸುಭುದೇಂದ್ರ ತೀರ್ಥ ಸ್ವಾಮೀಜಿ..!

ಬಾಗಲಕೋಟೆ: ನಾನು ಹಿಂದೂ ಅಂದಮೇಲೆ, ಹಿಂದುತ್ವವನ್ನ ಆಧರಿಸಲೇ ಬೇಕು ಎಂದು ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ನಾನೂ ಹಿಂದೂ, ಆದ್ರೆ ಹಿಂದುತ್ವ ಒಪ್ಪಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ದ್ಚಂದ್ವ ಹೇಳಿಕೆಯಲ್ಲಿ ಅರ್ಥವೇ ಇಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಯಾವ ಹಿನ್ನೆಲೆಯಲ್ಲಿ ಆ ಭಾವನೆಯನ್ನ ಹೇಳ್ತಾರೆ, ಹಿಂದುತ್ವ ವಿಚಾರದಲ್ಲಿ ಅವರಿಗೆ ಸ್ವಲ್ಪ ಬೇಧ ಇರಬಹುದೇ ಹೊರೆತು, ಹಿಂದೂಗಳೆಲ್ಲರೂ ಹಿಂದುತ್ವವನ್ನ ಆಧರಿಸಲೇಬೇಕು. ಹಿಂದುಗಳಲ್ಲಿ ಇರುವಂತಹದ್ದು ಹಿಂದುತ್ವ. ನನ್ನ ತಾಯಿ ಅನ್ನೋದು, ಅವಳು ನಿಸ್ಸಾಂತಾನ ಉಳ್ಳುವಳು ಅನ್ನೋದು. ಇದು ಎಷ್ಟು ಅಪಹಾಸ್ಯ. ತಾಯಿ ಎಂದಮೇಲೆ, ಅವಳಿಗೆ ಸಂತಾನ ನೀನು ಅಂತಾ ಆಯ್ತಲ್ಲ. ನಾನು ಹಿಂದೂ ಎಂದಮೇಲೆ ನಾವು ಗೌರವನ್ನ ಕೋರಲೇಬೇಕು. ಯಾವುದಾದ್ರೂ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ರೆ, ವಿಚಾರ ವಿನಿಮಯ ಮಾಡಿಕೊಂಡು ಅದನ್ನ ಪರಿಸಿಕೊಳ್ಳಬೇಕು. ಹಿಂದೂ ಎಂದು ಹಿಂದುತ್ವ ವಿರೋಧಿಸ್ತೇನೆ ಅನ್ನೋದು ಅರ್ಥಹೀನ ಎಂದಿದ್ದಾರೆ.