ಸಿದ್ದರಾಮಯ್ಯ ಸ್ಪರ್ಧೆಗೆ 1 ಕೋಟಿ ಆಫರ್ ನೀಡಿದ ಅಭಿಮಾನಿ: 2೦ ಲಕ್ಷ ರೂ, 5 ಚೆಕ್ ರೆಡಿ..!

ಯಾದಗಿರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿಮಾನಿಯೊಬ್ಬರು ಕೋಟಿ ರೂಪಾಯಿ ಆಫರ್ ನೀಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದ ಮುಖಂಡ ಚಂದ್ರಾಯ ನಾಗರಾಳ ಸಿದ್ದರಾಮಯ್ಯನವರಿಗೆ ಆಫರ್ ನೀಡಿದ್ದಾರೆ. ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಯಾದಗಿರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲಿ, ಸಿದ್ದರಾಮಯ್ಯ ಯಾದಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ 1 ಕೋಟಿ ರೂಪಾಯಿ ಚೆಕ್ ನೀಡುವುದಾಗಿ ಹೇಳಿದ್ದಾರೆ.
ಈ ಮಾತನಾಡಿದ ಚಂದ್ರಾಯ, ಚುನಾವಣೆ ಖರ್ಚಿಗಾಗಿ 1 ಕೋಟಿ ರೂ ರೂಪಾಯಿ ಚೆಕ್ ನೀಡುತ್ತೆನೆ, ನಾಳೆ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಯಾದಗಿರಿಗೆ ಆಗಮಿಸುತ್ತಿದ್ದು, ಅವರನ್ನ ಭೇಟಿಯಾಗುತ್ತೆವೆ, ಒಂದು ವೇಳೆ ಭೇಟಿಯಾಗಲು ಸಾಧ್ಯವಾಗದಿದ್ದರೆ, ಬೆಂಗಳೂರುಗೆ ತೆರಳಿ ಅವರನ್ನ ಭೇಟಿಯಾಗಿ ವಿನಂತಿ ಮಾಡುತ್ತೆವೆ ಎಂದಿದ್ದಾರೆ. ಇನ್ನು ಸಿದ್ದರಾಮಯ್ಯಗಾಗಿ ಈಗಾಗಲೇ ಜಮೀನು ಮಾರಾಟಕ್ಕೆ ಮುಂದಾದ ಚಂದ್ರಾಯ ನಾಗರಾಳ, ಮುಂಗಡ ಹಣ ಪಡೆದ ಆಂಧ್ರಮೂಲದ ವ್ಯಕ್ತಿಗೆ 7 ಎಕರೆ ಮಾರಾಟ ಮಾಡಲು ಸಿದ್ದರಾಗಿದ್ದಾರೆ. ಅದೇ ಹಣದಲ್ಲಿ ಸಿದ್ದರಾಮಯ್ಯ ಹೆಸರಿನಲ್ಲಿ 20 ಲಕ್ಷ ರೂಪಾಯಿಯ ಒಟ್ಟು 5 ಚೆಕ್ ಬರೆದಿದ್ದಾರೆ.