ಜಿಲ್ಲಾ ಸುದ್ದಿ
ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ರದ್ದ..!
ಬಾಗಲಕೋಟೆ: ಫೆಬ್ರವರಿ 02 (ಕರ್ನಾಟಕ ವಾರ್ತೆ) : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಫೆಬ್ರವರಿ 7 ರಿಂದ 11 ವರೆಗೆ ಜರುಗಬೇಕಾಗಿದ್ದ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆಯನ್ನು ಜಾನುವಾರುಗಳಿಗೆ ಎಸ್‍ಎಸ್‍ಡಿ ಚರ್ಮಗಂಟು ರೋಗ ಹರಡಿರುವುದರಿಂದ ಜಿಲ್ಲಾಧಿಕಾರಿಗಳು ಅಕ್ಟೋಬರ 27 ರಿಂದ ಜಾನುವಾರು ಜಾತ್ರಗಳನ್ನು ರದ್ದುಪಡಿಸಿ ಆದೇಶಿಸಿದ ಹಿನ್ನಲೆಯಲ್ಲಿ ಸದರಿ ಜಾನುವಾರು ಜಾತ್ರೆಯನ್ನು ರದ್ದುಪಡಿಸಲಾಗಿದೆ. ರೈತ ಭಾಂಧವರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..