ನಿಕಟಪೂರ್ವ ತಹಶೀಲ್ದಾರ ಪಾಟೀಲಗೆ ಬೀಳ್ಕೊಡುಗೆ, ನೂತನ ತಹಶೀಲ್ದಾರ ಅಮರೇಶ ಪಮ್ಮಾರ..!

ಬಾಗಲಕೋಟೆ: ತಾಲೂಕಿನ ನೂತನ ತಹಶೀಲ್ದಾರರಾಗಿ ಅಮರೇಶ ಪಮ್ಮಾರ ಬುಧವಾರ ಅಧಿಕಾರ ವಹಿಸಿಕೊಂಡಿದ್ದು, ನಿಕಟಪೂರ್ವ ತಹಶೀಲ್ದಾರರಾದ ವಿನಯ ಪಾಟೀಲ ಅವರಿಗೆ ತಾಲೂಕಾ ಆಡಳಿತದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುವ ಸಮಾರಂಭ ಜರುಗಿತು. ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಹಮ್ಮಿಕೊಂಡ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭದಲ್ಲಿ ನಿಟಕಪೂರ್ವ ತಹಶೀಲ್ದಾರ ವಿನಯ ಪಾಟೀಲ ಮಾತನಾಡಿ ಬಾಗಲಕೋಟೆಯಲ್ಲಿ ಮಾಡಿದ ಕಾರ್ಯ ತೃಪ್ತಿ ತಂದಿದೆ. ಇದಕ್ಕೆ ಕಾರಣ ಜಿಲ್ಲೆಯ ಹಾಗೂ ತಾಲೂಕಿನ ಅಧಿಕಾರಿಗಳ ಸಹಕಾರದಿಂದ ಸಾಧ್ಯವಾಯಿತು. ಸರಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ. ಆದರೆ ಮಾಡುವ ಕಾರ್ಯದಲ್ಲಿ ತೃಪ್ತಿ ಇರಬೇಕು ಎಂದ ಅವರು ನನ್ನ ಅಧಿಕಾರ ಅವಧಿಯಲ್ಲಿ ಗ್ರಾ.ಪಂ ಚುನಾವಣೆಯಿಂದ ಹಿಡಿದು ಸಂಸತ್ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದರು. ವಕ್ಪ್ ಬೋರ್ಡ ಚುನಾವಣೆ ಕಾರ್ಯ ನನಗೆ ನಿದ್ದೆಗೆಡಿಸಿತು. ಆದರೂ ಕೂಡಾ ಚುನಾವಣೆಗೆ ನಿಂತ ಅಭ್ಯರ್ಥಿಗಳ ಮನವಲಿಸಿ ಯಾರಿಗೂ ಅನ್ಯಾಯವಾಗದಂತೆ ದಕ್ಷ ಹಾಗೂ ನಿಷ್ಠೆಯಿಂದ ಚುನಾವಣೆ ಮಾಡಿದ್ದರಿಂದ ಸೋತ ಅಭ್ಯರ್ಥಿಗಳು ಕೂಡಾ ಅಭಿನಂಧನೆ ಸಲ್ಲಿಸಿದ್ದು, ಅವೀಸ್ಮರಣಿಯವಾಗಿದೆ. ಇಂತಹ ಸಂದರ್ಭಗಳು ಸರಕಾರಿ ನೌಕರರದಾರರಿಗೆ ಬರುತ್ತವೆ. ಇದನ್ನು ಎದುರಿಸಿ ಕಾರ್ಯನಿರ್ವಹಿಸಬೇಕಿದೆ ಎಂದರು.
ನೂತನವಾಗಿ ತಹಶೀಲ್ದಾರರಾಗಿ ಅಧಿಕಾರ ಅವಹಿಸಿದ ಅಮರೇಶ ಪಮ್ಮಾರ ಮಾತನಾಡಿ ಈಗಾಗಲೇ ಬಾಗಲಕೋಟೆ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿದ ವಿನಯ ಪಾಟೀಲ ಅವರು ಆಡಳಿತಕ್ಕೆ ಎಲ್ಲರೀತಿಯ ವ್ಯವಸ್ಥೆ ಕಲ್ಪಸಿದ್ದು, ಅದನ್ನು ಉಳಿಸಿಕೊಂಡು ಮುಂದುವರಿಸಿಕೊಂಡು ಹೋಗುವ ಕಾರ್ಯ ನಮ್ಮದಾಗಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಜಿಲ್ಲಾಧಿಕಾರಿಗಳ ಕಗ್ವಾವಲಿನಲ್ಲಿ ಕೆಲಸ ಮಾಡುತ್ತಿದ್ದು, ಯಾವುದೇ ಒಂದು ತಪ್ಪು ಮಾಡಿದರು ಅವರ ಗಮನಕ್ಕೆ ಬರುತ್ತದೆ. ಆ ರೀತಿಯಾಗದಂತೆ ಉತ್ತಮ ರೀತಿಯಲ್ಲಿ ಕೆಲಸ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಉಪ ನೋಂದಣಾಧಿಕಾರಿ ಅನೀಲ ಜಮಖಂಡಿ, ಗ್ರೇಡ್-2 ತಹಶೀಲ್ದಾರ ಎಂ.ಜಿ.ಬಿರಾದಾರ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು, ಶಿರಸ್ತೆದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.