ರಾಜಕೀಯ

ಪಾಕಿಸ್ತಾನದ ಪದ ಬಳಕೆ ಮಾಡಬಾರದಿತ್ತು: ಶಾಸಕ ವೀರಣ್ಣ ಚರಂತಿಮಠ..!

ಬಾಗಲಕೋಟೆ: ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪದ ಬಳಕೆ ಮಾಡಬಾರದಿತ್ತು ಎಂದು ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಬಸವರಾಜ ಅವರಾದಿ ಅವರು ಪಾಕಿಸ್ತಾನ ಪದ ಬಳಕೆ ಮಾಡಿರುವ ವಿಚಾರಕ್ಕೆ  ಪ್ರತಿಕ್ರಿಯೆ ನೀಡಿ, ಸಭೆಯಲ್ಲಿ ಪಾಕಿಸ್ತಾನ ಅಂತ ಪದ ಬಳಿಕೆ ಮಾಡಬಾರದಿತ್ತು. ಈ ಪದ ಬಳಕೆ ಮಾಡಬಾರದು ಅಂತಾ ನಾನು ಅವಾಗಲೇ ಹೇಳಿದ್ದೇನೆ. ಅದರಲ್ಲಿ ಅಂತಾ ದೊಡ್ಡ ವಿಷಯ ಏನೂ ಇಲ್ಲ. ಬಾಗಲಕೋಟೆ ನಗರ ಅಭಿವೃದ್ದಿ ಮಾಡುತ್ತೇವೆ ಅದರಲ್ಲಿಯೂ 45ನೇ ಸೆಕ್ಟರ್ ಬರುತ್ತೆ, ಅದೇ ಬೇರೆ ಇಲ್ಲ, ಈ ದಾಟಿಯಲ್ಲಿ ಅವರಾದಿ ಹೇಳಿದ್ದಾರೆ ಅಷ್ಟೆ. ಇರದಲ್ಲಿ ಕ್ಷಮೆ ಕೇಳುವ ಪ್ರಶ್ನೆ ಬರಲ್ಲ ಎಂದು ಚರಂತಿಮಠ ಹೇಳಿದ್ದಾರೆ. ಬುಧವಾರ ನಗರಸಭೆ ಆವರಣದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಎಷ್ಟು ಜನರು ಇದ್ದರು ಎಲ್ಲರಿಗೂ ಗೊತ್ತಿದೆ. ವಿನಾಕಾರಣ ಸಣ್ಣ ವಿಷಯ ದೊಡ್ಡದಾಗಿ ಮಾಡುತ್ತಿದ್ದಾರೆ. ಬಾಗಲಕೋಟೆ ಬಂದ್ ಮಾಡೋದಾದರೇ ಮಾಡಲಿ ನೋಡೋಣ ಎಂದಿದ್ದಾರೆ.

Leave a Reply

Your email address will not be published. Required fields are marked *

Back to top button