ಸಚಿವರ ಗ್ರಾಮ ವಾಸ್ತವ್ಯಕ್ಕೆ ಸಕಲ ಸಿದ್ಧತೆ: ಸ್ಥಳ ಪರಿಶೀಲಿಸಿದ ವಿಪ ಸದಸ್ಯ, ಅಧಿಕಾರಿಗಳು..!

ಬಾಗಲಕೋಟೆ : ಬೀಳಗಿ ಮತ ಕ್ಷೇತ್ರದ ಉದ್ದೇಶಿತ ಕಲಾದಗಿ ಗ್ರಾಮ ವಾಸ್ತವ್ಯಕ್ಕಾಗಿ ಕಂದಾಯ ಸಚಿವ ಆರ್. ಅಶೋಕ್ ಅವರು ನಾಳೆ ಶನಿವಾರ ದಿ : ಫೆಬ್ರವರಿ 25 ರಂದು ಬೀಳಗಿ ಮತ ಕ್ಷೇತ್ರದ ಕಲಾದಗಿ ಗ್ರಾಮಕ್ಕೆ ಆಗಮಿಸಲಿದ್ದಾರೆ.
ಗ್ರಾಮದ ಗುರುಲಿಂಗೇಶ್ವರ ಪ್ರೌಢಶಾಲೆಗೆ ಬೆಳಿಗ್ಗೆ 11-30 ಆಗಮಿಸಲಿರುವ ಸಚಿವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಅಹವಾಲು ಸ್ವೀಕರಿಸಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಇನ್ನು, ನಾಳೆಯ ಕಾರ್ಯಕ್ರಮ ಕುರಿತು ಪ್ರೌಢಶಾಲೆಯಲ್ಲಿ ಹಾಕಲಾಗಿರುವ ಬೃಹತ್ ವೇದಿಕೆ ಹಾಗೂ ಸರ್ವ ಜಾಗದ ಕುರಿತು ಪರಿಶೀಲನೆ ನಡೆಸಲಾಯಿತು. ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಸಂಗಮೇಶ್ ನಿರಾಣಿ, ಹೂವಪ್ಪ ರಾಠೋಡ್, ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ನಾಳೆಯ ಈ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರು, ಬೀಳಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಡಾ : ಮುರುಗೇಶ್ ನಿರಾಣಿ ಅವರು, ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಸೇರಿದಂತೆ ಸಚಿವರು ಶಾಸಕರು ಕಾರ್ಯಕರ್ತರು ಹಾಗೂ ಬೀಳಗಿ ಮತ ಕ್ಷೇತ್ರದ ಜನರು ಪಾಲ್ಗೊಳ್ಳಲಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸಕಲ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು.