
ಬಾಗಲಕೋಟೆ: ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲಾಗು- ತಿರುವ ‘ಸೆಂಗೋಲ್’ ಪ್ರತಿರೂಪ ಬಾಗಲಕೋಟೆ ಜಿಲ್ಲೆಯ ಪಟ್ಟದ ಕಲ್ಲಿನ ವಿರೂಪಾಕ್ಷ ದೇವಾಲಯ ಗೋಡೆ ಮೇಲೆ ಕೆತ್ತಲಾಗಿರುವ ಶಿವ ಮೂರ್ತಿಯ ಕೈಯಲ್ಲಿದೆ. ವಿರೂಪಾಕ್ಷ ದೇವಾಲಯದ ಎಡಭಾಗದಲ್ಲಿ ‘ಸೆಂಗೋಲ್” ಹಿಡಿದಿರುವ ಶಿವನ ಮೂರ್ತಿಯನ್ನು ಕಾಣಬಹುದಾಗಿದೆ. ಶಿವನ ಮೂರ್ತಿಯು ಇಲ್ಲಿ ಚರ್ತುಭುಜನಾ- ಗಿದ್ದು, ಅಜ್ಞಾನದ ಸಂಕೇತವಾಗಿರುವ ಮೂರ್ತಿಯೊಂದನ್ನು ತುಳಿದು ನಟರಾಜನ ಭಂಗಿಯಲ್ಲಿ ನೃತ್ಯ ಮಾಡುತ್ತಿರುವ ರೂಪದಲ್ಲಿದೆ. ಎಡಗೈಯಲ್ಲಿ ‘ಸೆಂಗೋಲ್” ಹಿಡಿದುಕೊಂಡಿದ್ದು ಕಂಡುಬರುತ್ತದೆ.
ವಿರೂಪಾಕ್ಷ ದೇವಾಲಯವು ಕ್ರಿ.ಶ 742ರಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ. ವೀರೂಪಾಕ್ಷ ದೇವಾಲಯದ ಗೋಡೆ.ಮೇಲಿರುವ ಶಿವ ಮೂರ್ತಿ ಇದ್ದು, ಶಿವನು ಹಿಡಿದುಕೊಂಡಿರುತ್ತಿದ್ದ ಎಡಗೈಯಲ್ಲಿ ಸೆಂಗೋಲ್ ಕಾಣಬಹುದು ದಂಡವಾಗಿದೆ. ಅದರ ಮೇಲೆ ಶಿವನ ವಾಹನ ನಂದಿಯೂ ಇರುತ್ತಿತ್ತು. ಅದನ್ನೇ ಕಲಾವಿದ ತನ್ನ ಕಲೆಯಲ್ಲಿ ಅರಳಿಸಿದ್ದಾನೆ ಎನ್ನಲಾಗುತ್ತಿದೆ. ಚೋಳ ರಾಜರು ಮುಂದಿನ ತಲೆಮಾರಿಗೆ ಅಧಿಕಾರ ಹಸ್ತಾಂತರ ಮಾಡುವುದರ ಸಂಕೇತವಾಗಿ ‘ಸೆಂಗೋಲ್’ ನೀಡುತ್ತಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಚಾಲುಕ್ಯರ ಕಾಲದಲ್ಲೂ ಇದು ಬಳಕೆಯಲ್ಲಿತ್ತು ಎಂಬುದು ಪಟ್ಟದ ಕಲ್ಲಿನಲ್ಲಿ ನೋಡಿದಾಗ ಗೊತ್ತಾಗುತ್ತದೆ.